Chairman’s Message

ಅಧ್ಯಕ್ಷರ ಸಂದೇಶ

ಕರ್ನಾಟಕದ ಹೆಸರನ್ನು, ಉಸಿರನ್ನು ಹೊತ್ತ ಕನ್ನಡದ ಮಾತೃಸಂಸ್ಥೆ ಧಾರವಾಡದ ಕೆ ಸಿ ಸಿ ಬ್ಯಾಂಕು, ಈ ಬ್ಯಾಂಕು ಏಕಾ ಏಕಿಯಾಗಿ ಬೆಳೆದು ಬಂದುದಲ್ಲ. ಇದಕ್ಕೆ 100 ವರ್ಷಗಳ ಜೀವಂತ ಇತಿಹಾಸವಿದೆ, ಸಂಸ್ಥೆಯ ಇತಿಹಾಸ, ಬದಲಾವಣೆಯ ಚಿತ್ರಗಳು ಜನರ ಕಣ್ಣ ಮುಂದೆ ದೃಶ್ಯ ಕಾವ್ಯದಂತೆ ಇದೆ. ಹೊಸ ಮಳೆ ಪ್ರಾರಂಭವಾಗಿ ಹೊಸ ನೀರು ಹರಿಯುತ್ತಿದೆ. ಬ್ಯಾಂಕಿನ ಸೇವೆ ನಿರಂತರ ಹರಿಯುವ ಸಲಿಲದಂತೆ ಇದೆ.

ಮಧ್ಯವರ್ತಿ ಬ್ಯಾಂಕ ಆರಂಭವಾಗಬೇಕು ಎಂಬ ಕನಸಿಗೆ ಬಣ್ಣ ತುಂಬಿದವರು ದಿವಾನ ಬಹಾದ್ದೂರ ಲಿಂ. ಎಸ್ ವ್ಹಿ ಮೆಣಸಿನಕಾಯಿ ಹಾಗೂ ರಾವ್ ಬಹದ್ದೂರ ಆರ್ ಸಿ ಅರಟಾಳರವರು. 1916 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿ ಸಹಕಾರ ಕ್ಷೇತ್ರವನ್ನು ಸಮೃಧ್ಧಿಗೊಳಿಸಿದರು. ಉತ್ತರ ಕರ್ನಾಟಕ ಉರಿ ಬಿಸಿಲು, ಹಗಲು ರಾತ್ರಿಯನ್ನದೇ ರೈತರ ಮನ-ಮನೆ ಮುಟ್ಟಿ ಜಾಗೃತಿ ಮೂಡಿಸಿದ ಅವರ ನೆನಹು ಸಹಕಾರಿಗಳ ಬಾಳಿನ ಬುತ್ತಿ,

Mallikarjun A Horakeri President (1)

SHRI MALLIKARJUN A HORAKERI

ಅಧ್ಯಕ್ಷರು ಕೆ ಸಿ ಸಿ ಬ್ಯಾಂಕ್ ಲಿ., ಧಾರವಾಡ.

ಮಧ್ಯವರ್ತಿ ಬ್ಯಾಂಕ ಆರಂಭವಾಗಬೇಕು ಎಂಬ ಕನಸಿಗೆ ಬಣ್ಣ ತುಂಬಿದವರು ದಿವಾನ ಬಹಾದ್ದೂರ ಲಿಂ. ಎಸ್ ವ್ಹಿ ಮೆಣಸಿನಕಾಯಿ ಹಾಗೂ ರಾವ್ ಬಹದ್ದೂರ ಆರ್ ಸಿ ಅರಟಾಳರವರು. 1916 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿ ಸಹಕಾರ ಕ್ಷೇತ್ರವನ್ನು ಸಮೃಧ್ಧಿಗೊಳಿಸಿದರು. ಉತ್ತರ ಕರ್ನಾಟಕ ಉರಿ ಬಿಸಿಲು, ಹಗಲು ರಾತ್ರಿಯನ್ನದೇ ರೈತರ ಮನ-ಮನೆ ಮುಟ್ಟಿ ಜಾಗೃತಿ ಮೂಡಿಸಿದ ಅವರ ನೆನಹು ಸಹಕಾರಿಗಳ ಬಾಳಿನ ಬುತ್ತಿ,

ಪರಸ್ಪರ ಸಹಕಾರದಿಂದ ಹಾಗೂ ನಿಸ್ವಾರ್ಥ ಸೇವೆಯಿಂದ ಅವಿಭಜಿತ ಧಾರವಾಡ ಜಿಲ್ಲೆಯ ( ಧಾರವಾಡ, ಗದಗ, ಹಾವೇರಿ ) ಸಹಕಾರಿ ಕ್ಷೇತ್ರದಲ್ಲಿ ಹೆಮ್ಮೆಯ ಸ್ಥಾನಮಾನ ಗಳಿಸಿಕೊಂಡಿರುವ ಕೆ ಸಿ ಸಿ ಬ್ಯಾಂಕ್ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ಸಾಧನೆಯ 100 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ನಮ್ಮ ಬ್ಯಾಂಕ್ ಸಮಸ್ತ ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯನ್ನು ಆದರ್ಶವಾಗಿಟ್ಟುಕೊಂಡಿದೆ.

ವರದಿ ವರ್ಷದಲ್ಲಿ ಕೆ ಸಿ ಸಿ ಬ್ಯಾಂಕು ಸಾಧಿಸಿದ ಅಭೂತಪೂರ್ವ ಕಾರ್ಯ ಸಾಧನೆಯನ್ನು ತಮ್ಮ ಮುಂದಿಡುತ್ತಾ ಈ ಬ್ಯಾಂಕಿನ ಅಭಿವೃದ್ಧಿಯ ಸ್ಪೂರ್ತಿಗಳಾದ ಹಾಗೂ ಈ ಬ್ಯಾಂಕಿನ ಶ್ರೇಯಸ್ಸಿಗೆ ಸಹಕರಿಸಿದ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿಗೆ, ಸಹಕಾರಿ ಇಲಾಖಾಧಿಕಾರಿಗಳಿಗೆ, ಸರಕಾರಿ ಅಧಿಕಾರಿಗಳಿಗೆ, ಜಿಲ್ಲಾ ಸಹಕಾರಿ ಒಕ್ಕೂಟಗಳಿಗೆ, ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಿಗೆ ಮತ್ತು ವಿವಿಧ ಸಹಕಾರಿ ಸಂಘ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಹಾಗೂ ಬ್ಯಾಂಕಿನ ಗೌರವಾನ್ವಿತ ಗ್ರಾಹಕರು ಮತ್ತು ಸಹಕಾರಿ ಬಂಧುಗಳಿಗೆ ಶತಮಾನೋತ್ಸವದ ಶುಭಾರಂಭಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ರಾಜ್ಯದ ಕೃಷಿಕರ ಸರ್ವತೋಮುಖ ಏಳಿಗೆಯ ದೃಷ್ಠಿಯಿಂದ ರಾಜ್ಯ ಸರಕಾರ ಕೃಷಿಕರಿಗೆ ಬಡ್ಡಿ ಸಹಾಯಧನವನ್ನು ಈಗಲೂ ಮುಂದುವರಿಸಿರುವುದು ಸಂತೋಷದ ವಿಷಯವಾಗಿದೆ. ಮಾತ್ರವಲ್ಲ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ.3.00 ಲಕ್ಷದವರೆಗೆ ಬೆಳೆಸಾಲ ಹಾಗೂ ರೂ.10.00 ಲಕ್ಷದವರೆಗೆ ಶೇ.3 ಬಡ್ಡಿ ದರದಲ್ಲಿ ಕೃಷಿ ಮಾಧ್ಯಮಿಕ ಸಾಲವನ್ನು ನೀಡಲು ಸಹಕರಿಸಿದ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ  ಎಸ್  ಬೊಮ್ಮಾಯಿ  ರವರಿಗೆ ಮತ್ತು ಮಾನ್ಯ ಸಹಕಾರಿ ಸಚಿವರಾದ ಸನ್ಮಾನ್ಯ ಶ್ರೀ S T ಸೋಮಶೇಖರವರಿಗೆ, ಸಚಿವ ಸಂಪುಟದ ಸದಸ್ಯರೆಲ್ಲರಿಗೂ ಹಾಗೂ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತಾ ಅವರ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಸೂಕ್ತ ಸಮಯದಲ್ಲಿ ಬ್ಯಾಂಕಿನ ಕಾರ್ಯ ನಿರ್ವಹಣೆಗೆ ಸಲಹೆ ಸೂಚನೆ ನೀಡಿದ ನಬಾರ್ಡ್ ಸಂಸ್ಥೆ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಸಹಕಾರ ಸಂಸ್ಥೆಗಳ ಆರ್ಥಿಕ ಬಲವರ್ಧನೆಗೆ ಸದಾ ಮುಂದಾಗಿರುವ ಈ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆಯೊಂದಿಗೆ ಗುರುತಿಸಿಕೊಂಡಿದೆ. ಈ ಸಾಧನೆಗಳ ಸಾಧನಾ ಶಕ್ತಿಗಳು ಮೂರು ಜಿಲ್ಲೆಗಳ ಸಮಸ್ತ ಜನತೆ ಮತ್ತು ಸಹಕಾರಿ ಬಂಧುಗಳು ಎನ್ನುವುದನ್ನು ಸ್ಮರಿಸುತ್ತಾ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಬ್ಯಾಂಕಿನ ಪ್ರಗತಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಪತ್ರಿಕಾ ಮಾಧ್ಯಮದವರನ್ನು ಆಡಳಿತ ಮಂಡಳಿಯ ಪರವಾಗಿ ಮತ್ತು ನನ್ನ ವೈಯಕ್ತಿಕ ನೆಲೆಯಲ್ಲಿ ಹೃತ್ಪೂರ್ವಕವಾಗಿ ವಂದಿಸುತ್ತೇನೆ. ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಿಗೆ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದ ಪ್ರಾಮಾಣಿಕ ಕರ್ತವ್ಯಕ್ಕಾಗಿ ಅವರನ್ನು ಅಭಿನಂಧಿಸುತ್ತಾ ಈ ಬ್ಯಾಂಕ್ನ್ನು ಮತ್ತಷ್ಟು ಸದೃಢತೆಯಲ್ಲಿ ಮುನ್ನಡೆಸಲು ತಮ್ಮೆಲ್ಲರ ಸಹಕಾರವನ್ನು ಅಪೇಕ್ಷಿಸುತ್ತೇನೆ.
ಜನ ಸೇವೆಯ, ಜನ ಸಂಪರ್ಕದ ಜನತಾ ಸಂಸ್ಥೆಯ ಸೇತುವೆ ಎಂದೂ ಕುಸಿಯಬಾರದು. ಆಸೆ-ಅಭಿಲಾಷೆಗಳನ್ನು ಮತ್ತು ಬೇಡಿಕೆಗಳನ್ನು ಈಡೇರಿಸುವ ಮೂಲಕ ಕಲ್ಯಾಣ ಸಾಧನೆಗೆ ದಾರಿ ತೋರಬೇಕು, ಬೆಳಕು ತೋರಬೆಕು, ಆಪತ್ತನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಸಹಕಾರಿ ಬಂಧುಗಳು ದಯಪಾಲಿಸಬೇಕು. ಜೀವಮಾನ ಸಾಧನೆಗೆ ಗೌರವ ತರುವ “ ಶತಮಾನೋತ್ಸವ ಶುಭಾರಂಭ” ಪ್ರಾರಂಭಿಸುವ ಮುನ್ನ ತಮ್ಮೆಲ್ಲರನ್ನೂ ನೆನೆಯುವ ಮೂಲಕ, ತಮ್ಮ ಸಹಾಯ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

|| ಜೈ ಸಹಕಾರ ||